Organiser's Detail
Tournament's Detail
NAME
AMRUTHA MOGERA PREMIER LEAGUE SEASON-2
DATES
23-Feb-24 to 26-Feb-24
LOCATIONS
Madikeri - Ammatti Gmp School Ground
Siddhapur - Ammathi
Other Details
*ಅಮೃತ ಯುವ ಮೊಗೇರ ವತಿಯಿಂದ ಕೊಡಗು ಮೊಗೇರ ಕ್ರಿಕೆಟ್ ಪ್ರೀಮಿಯರ್ ಲೀಗ್*
ಅಮೃತ ಯುವ ಮೊಗೇರ ಸಿದ್ದಾಪುರ ಅಮ್ಮತಿ ಹೋಬಳಿ ಇವರ ವತಿಯಿಂದ ದ್ವಿತೀಯ ಬಾರಿಗೆ ಮೊಗೇರ ಕ್ರಿಕೆಟ್ ಪ್ರೀಮಿಯರ್ ಲೀಗ್ ಪಂದ್ಯವು ಫೆಬ್ರವರಿ 24,25,26 ರಂದು ಅಮ್ಮತಿಯ ಪ್ರೌಢಶಾಲೆ ಮೈದಾನದಲ್ಲಿ ನಡೆಯಲಿದೆ, ಒಟ್ಟು ಹತ್ತು ಮಾಲೀಕತ್ವದ ಹತ್ತು ತಂಡಗಳು ಪಾಲ್ಗೊಳ್ಳಲಿದ್ದು ,ಟೀಮ್ ಹಂಟರ್ಸ್ ಮರಗೋಡು, ಫ್ರೆಂಡ್ಸ್ ಕ್ರಿಕೆಟರ್ಸ್ ಅಮ್ಮತಿ, SPM ರಾಯಲ್ ವಿರಾಜಪೇಟೆ, ಪ್ರೆಸಿಡೆಂಟ್ಸ್ XI ಸೋಮವಾರಪೇಟೆ, ಟೀಮ್ ಕಾರ್ಣಿಕ ಕೊಡಗು, ರಾಪ್ಟಾರ್ ಕಾನನಕಾಡು,ಟೀಮ್ ಬ್ರದರ್ಸ್ ಬಕ್ಕ, ಫ್ರೆಂಡ್ಸ್ Xl ಅಮ್ಮತಿ, ಮರ್ಸಿಲೆಸ್ಸ್ ಕ್ರಿಕೆಟರ್ಸ್, ಕ್ಯಾಪ್ಟನ್ ಕ್ರಿಕೆಟರ್ಸ್ ಸುಂಟಿಕೊಪ್ಪ, ತಂಡಗಳ ನಡುವೆ ಲೀಗ್ ಪಂದ್ಯಗಳು ನಡೆಯಲಿವೆ. ಪಂದ್ಯ ಕೂಟದ ವಿನ್ನರ್ಸ್ ತಂಡಕ್ಕೆ 50,000ನಗದು ಹಾಗೂ ಆಕರ್ಷಕ ಟ್ರೊಫಿ, ರನ್ನರ್ಸ್ ತಂಡಕ್ಕೆ 25,000 ನಗದು ಹಾಗೂ ಆಕರ್ಷಕ ಟ್ರೊಫಿ ಹಾಗೆಯೇ ವೈಯಕ್ತಿಕ ,ಟ್ರೊಫಿಗಳು ಕೂಡ ಕ್ರೀಡಾಪಟುಗಳಿಗೆ ಸಿಗಲಿದೆ,
ಕ್ರೀಡಾ ಕೂಟದ ಉದ್ಘಾಟನೆಯನ್ನು ಅಮೃತ ಯುವ ಮೊಗೇರ ಸೇವಾ ಸಮಾಜದ ಕ್ರೀಡಾ ಅಧ್ಯಕ್ಷರಾದ ಪಿ. ಸಿ. ರಮೇಶ್ ರವರು ಉದ್ಘಾಟನೆ ಮಾಡಲಿದ್ದಾರೆ ಮುಖ್ಯ ಅತಿಥಿಗಳಾಗಿ ಅಮೃತ ಯುವ ಮೊಗೇರ ಸೇವಾ ಸಮಾಜದ ಅಧ್ಯಕ್ಷ ಮಂಜು. ಪಿ. ಕೆ. ಕೊಡಗು ಜಿಲ್ಲಾ ಮೊಗೇರ ಸೇವಾ ಸಮಾಜದ ಜಿಲ್ಲಾಅಧ್ಯಕ್ಷ ಜನಾರ್ಧನ್, ತುಳು ಸಾಹಿತ್ಯ ಅಕಾಡಮಿಯ ಸದಸ್ಯ ಹಾಗೂ ಬಿಜೆಪಿ ಎಸ್. ಸಿ. ಮೋರ್ಚಾ ಘಟಕದ ರವಿ. ಪಿ. ಎಂ. ಕೊಡಗು ಜಿಲ್ಲಾ ಮೊಗೇರ ಸೇವಾ ಸಮಾಜದ ಜಿಲ್ಲಾ ಕ್ರೀಡಾ ಅಧ್ಯಕ್ಷ ಎಂ.ಜಿ. ಚಂದ್ರ ಹಾಗೂ ಸಮಾಜದ ಗೌರವ ಅಧ್ಯಕ್ಷರು ಅಕ್ಕಮ್ಮ ಮೂರ್ತಿ ಇವರು ಪಾಲ್ಗೊಳ್ಳಲಿದ್ದಾರೆ
ಕ್ರೀಡಾ ಕೂಟದ ಪ್ರಮುಖವಾಗಿ ಆಯೋಜಕರು ಹಾಗೂ ಕೊಡಗು ಪತ್ರಕರ್ತರ ನಡುವೆ ಪ್ರದರ್ಶನ ಪಂದ್ಯವು ನಡೆಯಲಿದೆ ಎಂದು ಆಯೋಜಕರಾಗಿರುವ, ರಾಮು. ಪಿ.ಎನ್. ವಿಶ್ವ,ಮಣಿ, ರಘು, ಕೃಷ್ಣ, ನಾರಾಯಣ, ಗಣೇಶ, ಜನರ್ಧನ್,ಪ್ರಕಟಣೆಯಲ್ಲಿ ತಿಳಿಸಿದ್ದಾರೆ.