ಕೊಡಗು ಪ್ರಸ್ ಕ್ಲಬ್ ಕ್ರಿಕೆಟ್ ಪ್ರಿಮೀಯರ್ ಲೀಗ್ - ೩
ನಿಬಂಧನೆಗಳು:
೧. ಎ ಮತ್ತು ಬಿ ವಿಭಾಗದ ಎರಡು ಪೂಲ್‌ಗಳಾಗಿ ತಂಡಗಳನ್ನು ವಿಂಗಡನೆ ಮಾಡಲಾಗಿದ್ದು, ಒಂದು ಪೂಲ್‌ನಲ್ಲಿ ೪ ತಂಡಗಳಂತೆ ಎರಡು ಪೂಲ್‌ನಲ್ಲಿ ಒಟ್ಟು ೮ ತಂಡಗಳು ಒಳಗೊಂಡಿರುತ್ತದೆ.
೨. ಲೀಗ್ ಮಾದರಿಯ ಪಂದ್ಯಗಳಾಗಿದ್ದು, ಲೀಗ್ ಹಂತದಲ್ಲಿ ಪ್ರತಿ ತಂಡವು ೩ ಪಂದ್ಯಗಳನ್ನು ಆಡಬೇಕಾಗಿರುತ್ತದೆ.
೩. ಲೀಗ್ ಹಂತದ ಪಂದ್ಯಗಳು ಟೈ (ಪಂದ್ಯ ಸಮಬಲ) ಆದರೆ ಸೂಪರ್ ಓವರ್ ಆಡಿಸಲಾಗುತ್ತದೆ. ಸೂಪರ್ ಓವರ್ ಟೈ ಆದರೇ ಮತ್ತೆ ಸೂಪರ್ ಓವರ್ ಮುಂದುವರೆಸಲಾಗುತ್ತದೆ.
೪. ಅನುಭವಿ ತೀರ್ಪಗಾರರು ಪಂದ್ಯಾಟದ ತೀರ್ಪುಗಾರರಾಗಿ ಕರ್ತವ್ಯ ನಿರ್ವಹಿಸಲಿದ್ದು, ತೀರ್ಪುಗಾರರ ತೀರ್ಮಾನವೇ ಅಂತಿಮವಾಗಿರುತ್ತದೆ.
೫. ಪ್ರತಿ ಪಂದ್ಯಕ್ಕೂ ನೆಟ್ ರನ್ ರೇಟ್ ವ್ಯವಸ್ಥೆ ಕಲ್ಪಿಸಲಾಗಿದ್ದು, ತಂಡಗಳ ನೆಟ್ ರನ್ ರೇಟನ್ನು ’ಕ್ರಿಕ್ ಹೀರೋಸ್’ ಆಪ್ ನಲ್ಲಿ ಅಪ್‌ಲೋಡ್ ಮಾಡಲಾಗುತ್ತದೆ. ಈ ಬಗ್ಗೆ ಯಾವುದಾದರೂ ಸಂದೇಹಗಳಿದ್ದರೇ ಸ್ಕೋರರ್ ಹಾಗೂ ತೀರ್ಪುಗಾರರನ್ನು ಸಂಪರ್ಕಿಸಬಹುದಾಗಿದೆ. ಈ ಬಗ್ಗೆ ತಂಡಗಳ ಮಾಲೀಕರು ಹಾಗೂ ನಾಯಕ ಅಥವಾ ಉಪನಾಯಕನಿಗೆ ಮಾತ್ರ ಮಾಹಿತಿ ಪಡೆಯಲು ಅವಕಾಶ ಇರುತ್ತದೆ.
೬. ಒಂದು ಪೂಲ್‌ನಲ್ಲಿ ಎರಡಕ್ಕಿಂತ ಹೆಚ್ಚು ತಂಡಗಳು ಸಮಾನ ಅಂಕ ಗಳಿಸಿದರೇ, ನೆಟ್ ರನ್‌ರೇಟ್ ಮೂಲಕ ಎರಡು ತಂಡಗಳನ್ನು ಮುಂದಿನ ಹಂತಕ್ಕೆ ಆಯ್ಕೆ ಮಾಡಲಾಗುವುದು.
೭. ಮಳೆಯಿಂದಾಗಿ ಪಂದ್ಯಾಟ ರದ್ದಾದರೇ ತೀರ್ಪುಗಾರರ ತೀರ್ಮಾನ ಅಂತಿಮವಾಗಿರುತ್ತದೆ.
೮. ಕೆ.ಪಿ.ಸಿ.ಪಿ.ಎಲ್ ನಲ್ಲಿ ಹೆಚ್ಚು ಅಂಕ ಪಡೆಯುವ ನಾಲ್ಕು ತಂಡಗಳು, ಅಂದರೇ ಪ್ರತೀ ಪೂಲ್‌ನಿಂದ ತಲಾ ಎರಡು ತಂಡಗಳು ಪ್ಲೇ ಆಫ್‌ಗೆ ಅರ್ಹತೆ ಪಡೆಯುತ್ತದೆ. ಪ್ಲೇ ಆಫ್ ಐಪಿಎಲ್ ಮಾದರಿಯಲ್ಲಿ ನಡೆಯಲಿದೆ.
೯. ಪ್ಲೇ ಆಫ್ ಪಂದ್ಯಾಟ ಟೈ ಆದರೇ ಸೂಪರ್ ಓವರ್ ಮೂಲಕ ವಿಜಯಶಾಲಿ ತಂಡವನ್ನು ನಿರ್ಧರಿಸಲಾಗುವುದು. ಪ್ರಥಮ ಸೂಪರ್ ಓವರ್ ಕೂಡ ಟೈ ಆದರೇ ದ್ವಿತೀಯ ಬಾರಿಗೆ ಸೂಪರ್ ಓವರ್ ಆಡಿಸಲಾಗುವುದು. ಅದೂ ಕೂಡ ಟೈ ಆದರೇ ಟೈ ಆದ ಮೂರೂ (ಪ್ಲೇ ಆಫ್‌ನ ಹಾಗೂ ಪ್ರಥಮ ಸೂಪರ್ ಓವರ್, ದ್ವಿತೀಯ ಸೂಪರ್ ಓವರ್) ಪಂದ್ಯದಲ್ಲಿ ಹೆಚ್ಚು ಬೌಂಡರಿ (೪ ಹಾಗೂ ೬) ಗಳಿಸಿದ ತಂಡವನ್ನು ಮುಂದಿನ ಹಂತಕ್ಕೆ ಆಯ್ಕೆ ಮಾಡಲಾಗುವುದು. ಬೌಂಡರಿ ಕೂಡ ಸಮಬಲವಾದಲ್ಲಿ ಟಾಸ್ ಮೂಲಕ ವಿಜಯಿ ತಂಡವನ್ನು ನಿರ್ಧರಿಸಲಾಗುವುದು. ಇದೇ ನಿಯಮ ಫೈನಲ್ ಪಂದ್ಯಾಟಕ್ಕೂ ಅನ್ವಯವಾಗಲಿದೆ.
೧೦. ಲೀಗ್ ಹಂತದ ಪಂದ್ಯಾಟವು ೫ ಓವರ್‌ಗೆ ಸೀಮಿತವಾಗಿರುತ್ತದೆ. ಒಬ್ಬ ಬೌಲರ್‌ಗೆ ಒಂದು ಓವರ್ ಎಸೆಯಲು ಮಾತ್ರ ಅವಕಾಶವಿರುತ್ತದೆ. ಎಲ್ಲಾ ತಂಡಗಳಲ್ಲಿಯೂ ೫ ಬೌಲರ್‌ಗಳಿರುವುದು ಕಡ್ಡಾಯವಾಗಿರುತ್ತದೆ.
೧೧. ಪ್ಲೇ ಆಫ್ ಪಂದ್ಯಾಟವು ೬ ಓವರ್‌ಗೆ ಸೀಮಿತವಾಗಿರುತ್ತದೆ. ಸಮಯದ ಅಭಾವವಿದ್ದರೇ, ಸದರಿ ಪಂದ್ಯಾಟದ ಓವರ್ ಕಡಿತಗೊಳಿಸುವ ಅಧಿಕಾರವನ್ನು ಕಾಯ್ದಿರಿಸಲಾಗಿದೆ.
೧೨. ಪಂದ್ಯಾಟದಲ್ಲಿ ಬೌಲಿಂಗ್ ಮಾಡುವ ಸಂದರ್ಭ ಚೆಕ್ ಬಾಲ್‌ಗೆ (ಥ್ರೋ) ಅವಕಾಶವಿರುವುದಿಲ್ಲ. ಮೊದಲ ಥ್ರೋಗೆ ವಾರ್ನಿಂಗ್ ನೀಡಲಿದ್ದು, ಮತ್ತೇ ಥ್ರೋ ಮಾಡಿದ್ದಲ್ಲಿ ಸದರಿ ಪಂದ್ಯಾಟ ಹಾಗೂ ಮುಂದಿನ ಒಂದು ಪಂದ್ಯಾಟಕ್ಕೆ ಆಡಲು ಅವಕಾಶವಿರುವುದಿಲ್ಲ.
೧೩. ಮೈದಾನಲ್ಲಿ ಪಂದ್ಯಾಟಕ್ಕೆ ಸಂಬಂಧಿಸಿದ ತೀರ್ಪುಗಾರರಲ್ಲಿ ಯಾವುದೇ ವಿಚಾರವನ್ನು ಚರ್ಚಿಸಲು ತಂಡದ ನಾಯಕ ಅಥವಾ ಉಪನಾಯಕನಿಗೆ ಮಾತ್ರ ಅವಕಾಶ ಇರುತ್ತದೆ.
೧೪. ವಿಲ್ಸನ್ - ೩ ಬಾಲ್‌ನಲ್ಲಿ ಪಂದ್ಯಾವಳಿ ನಡೆಯುತ್ತದೆ. ಪ್ರತಿ ಇನ್ನಿಂಗ್ಸ್‌ಗೆ ಹೊಸ ಬಾಲ್ ನೀಡಲಾಗುತ್ತದೆ.
೧೫. ಪಂದ್ಯಾವಳಿಯಲ್ಲಿ ೧ ಓವರ್ ಪವರ್ ಪ್ಲೇ ಇರಲಿದೆ. ಪವರ್ ಪ್ಲೇಯಲ್ಲಿ ಗರಿಷ್ಠ ಇಬ್ಬರು ಮಾತ್ರ ಹೊರಗೆ ಕ್ಷೇತ್ರರಕ್ಷಣೆ ಮಾಡಬೇಕಾಗುತ್ತದೆ.