Suji❤Chethu Premiere League (SCPL) ಮೊದಲ ವರ್ಷದ ಟೆನ್ನಿಸ್ ಬಾಲ್ ಕ್ರಿಕೆಟ್ ಪಂದ್ಯಾವಳಿಗಳನ್ನು ಆಯೋಜಿಸಲಾಗಿದೆ.
ದಿನಾಂಕ:- 18-05-2025
ಈ ಪಂದ್ಯಾವಳಿಯ ನಿಯಮಗಳು:-
1) ಪ್ರವೇಶ ಶುಲ್ಕ ಪ್ರತಿ ತಂಡಕ್ಕೆ 2000₹
2)ತಂಡಗಳು ಕಡ್ಡಾಯವಾಗಿ ಬೆಳಗ್ಗೆ 7:00ಕ್ಕೆ ಹಾಜರಿರಬೇಕು.ಸಮಯಕ್ಕೆ ಬಾರದ ತಂಡಗಳಿಗೆ ಆ ಪಂದ್ಯ ರದ್ದುಗೊಳಿಸಲಾಗುವುದು ಹಾಗೂ ಯಾವುದೇ Point ಇರುವುದಿಲ್ಲ,ಎರಡೂ ತಂಡದ ನಾಯಕರು ಪರಸ್ಪರ ಮಾತಾಡಿಕೊಂಡು ಸಮಯಕ್ಕೆ ಬರತಕ್ಕದ್ದು, ಒಂದು ತಂಡ ಬಂದು ನಾವು ಬಂದಿದ್ದೇವೆ ಅವರು ಬಂದಿಲ್ಲ ನಾವೇನು ಮಾಡುವುದು ಎಂದು ಕೇಳುವಂತಿಲ್ಲ..
3) ಪಂದ್ಯಗಳು ಆರು ಓವರುಗಳಿಗೆ ಸೀಮಿತವಾಗಿರುತ್ತವೆ.
4) ಬೌಲರ್ ಎರಡು ಎರಡು ಒಂದು ಒಂದು ಓವರಿನಂತೆ ಆಟಗಾರರು ಬೌಲ್ ಮಾಡಬೇಕು.
5) ಪಂದ್ಯ ಟೈ ಆದಲ್ಲಿ ಸೂಪರ್ ಓವರ್ ಆಡಿಸಲಾಗುತ್ತದೆ. ಗೊಂದಲವಾದಲ್ಲಿ ಆಯೋಜಕರ ನಿರ್ಧಾರ ಅಂತಿಮವಾಗಿರುತ್ತದೆ.
6) ಪಂದ್ಯದಲ್ಲಿ ಅಂಪೈರ್ ಹಾಗೂ ಆಯೋಜಕರ ತೀರ್ಪೇ ಅಂತಿಮ ತೀರ್ಪಾಗಿರುತ್ತದೆ.
7) ಚೆಕ್ ಬೌಲಿಂಗ್ ಅವಾಕಾಶ ಇರುವುದಿಲ್ಲ.
8) ಚೆಕ್ ಬೌಲಿಂಗ್ ವೇಗವನ್ನು ಬ್ಯಾಟ್ಸ್‌ಮನ್ ನಿರಾಕರಿಸಿದರೆ ಆ ಬಾಲನ್ನು ನೊ ಬಾಲ್ ಎಂದು ಪರಿಗಣಿಸಲಾಗುವುದು,ಹಾಗೂ ಆ ಬೌಲರ್ ಮತ್ತೆ ಯಾವುದೇ ಪಂದ್ಯದಲ್ಲೂ ಸಹ ಬೌಲಿಂಗ್ ಮಾಡುವಂತಿಲ್ಲ.. ಪಂದ್ಯದ ಕೊನೆಯ ಓವರಿನಲ್ಲಿ ಈ ಅಮಾನುಷ ಕ್ರಿಯೆಗಳು ನಡೆದರೆ ಯಾವುದೇ ತಂಡಕ್ಕೂ ರನ್ ನೀಡಲಾಗಿವುದಿಲ್ಲ,ಆ ಬಾಲ್ ಡೆಡ್ ಬಾಲ್ ಎಂದು ಘೋಷಿಸಲಾಗುವುದು,ಹಾಗೂ ಬೇರೆ ಬೌಲರ್ ರೀ ಬೌಲ್ ಮಾಡಬೇಕಾಗುತ್ತದೆ.
9) ಪ್ರತಿ ತಂಡಗಳಿಗೂ ಸಮವಸ್ತ್ರ ಕಡ್ಡಾಯ.
10) ಪ್ರತಿ ಪಂದ್ಯಕ್ಕೂ ಪಂದ್ಯ ಪುರುಷೋತ್ತಮ ಪ್ರಶಸ್ತಿಯನ್ನು ನೀಡಲಾಗುವುದು.
11) ಉತ್ತಮ ಆಟಗಾರನಾಗಿ ಹೊರಹೊಮ್ಮಿದ ಒಬ್ಬ ಆಟಗಾರನಿಗೆ ಸರಣಿ ಶ್ರೇಷ್ಠ ಪ್ರಶಸ್ತಿ ನೀಡಲಾಗುವುದು.
12) ಬೆಸ್ಟ್ ಬ್ಯಾಟ್ಸ್‌ಮನ್ & ಬೆಸ್ಟ್ ಬೌಲರ್ ಪ್ರಶಸ್ತಿ ಇರುತ್ತದೆ.
13) ಬಿಡ್ಡಿಂಗ್ ಮಾಡಿ ಫೈನಲ್ ಆದ ಆಟಗಾರರು ಮಾತ್ರ ಆಡಲು ಅವಕಾಶವುರುತ್ತದೆ. ಹಾಗೂ ಪ್ಲೇಯರ್ ನಿಗದಿತ 100₹ ಕೊಟ್ಟಂತಹ ಆಟಗಾರರು ಮಾತ್ರ ಆಡಲು ಅವಕಾಶವಿದೆ,ನಿಗದಿತ ಆಟಗಾರ ಹಾಜರಾಗದ ಸಮಯದಲ್ಲಿ ಬೇರೊಬ್ಬ ಆಟಗಾರನನ್ನ ಅಂಕಣದೊಳಗೆ ಕರೆತರುವುದಾದರೆ ಆ ಆಟಗಾರ 200₹ ಪಾವತಿ ಮಾಡಿ ಕೇವಲ ಬ್ಯಾಟಿಂಗ್ ಹಾಗೂ ಫೀಲ್ಡಿಂಗ್ ಮಾಡಬಹುದು,ಬೌಲಿಂಗ್ ಅವಕಾಶ ಇರುವುದಿಲ್ಲ.
14) ಊಟ ಮತ್ತು ನೀರಿನ ವ್ಯವಸ್ಥೆ ಇರುತ್ತದೆ.
15) ಪಂದ್ಯದಲ್ಲಿ ಸಭ್ಯತೆಯಿಂದ ವರ್ತಿಸಬೇಕಾಗಿ ವಿನಂತಿ. ಆಯಾ ತಂಡಗಳನ್ನು ನಾಯಕರುಗಳು ನಿಯಂತ್ರಣದಲ್ಲಿ ಇರಿಸಿಕೊಳ್ಳಬೇಕು.