test
player picture
Ramakshathriya Premier League Season -1, Yuva Trophy - 2025
Puttur (Karnataka)1500 Views
08-03-2025 to 09-03-2025
  • 15Total Matches
  • 5Total Teams

Organiser's Detail

Tournament's Detail

NAME

Ramakshathriya Premier League Season -1, Yuva Trophy - 2025

DATES

08-Mar-25 to 09-Mar-25

LOCATIONS

Puttur (Karnataka) - Junior College Ground, Kombettu

BALL TYPE

TENNIS

Other Details

ಕ್ಷತ್ರಿಯ ಪ್ರೀಮಿಯರ್ ಲೀಗ್ ಸೀಸನ್ -1
*ಕ್ರಿಕೆಟ್ ಪಂದ್ಯಾಟದ ನಿಯಮಾವಳಿಗಳು*

1. ಈಗಾಗಲೇ ನಿಗದಿಯಾಗಿರುವ 5 ತಂಡಗಳ ನಡುವೆ ಲೀಗ್ ಮಾದರಿಯಲ್ಲಿ ಪಂದ್ಯಗಳು ನಡೆಯುತ್ತವೆ. 
2. ಪ್ರತಿಯೊಂದು ಪಂದ್ಯಗಳು 4 ಓವರ್ ಗಳಿಗೆ ಸೀಮಿತವಾಗಿರುತ್ತದೆ. ಒಬ್ಬ ಎಸೆತಗಾರನಿಗೆ ಗರಿಷ್ಠ ಒಂದು ಓವರ್ ಎಸೆಯಲು ಮಾತ್ರ ಅವಕಾಶ. (ಒಂದು ವೇಳೆ ಪಂದ್ಯಗಳು ತಡವಾದರೆ ಅಥವಾ ಹೆಚ್ಚುವರಿ ಸಮಯ ಇದ್ದರೆ ಓವರ್ ಕಡಿತಗೊಳಿಸುವ ಅಥವಾ ಓವರ್ ಹೆಚ್ಚಿಸುವ ಅಧಿಕಾರ ಸಂಘಟಕರಿಗೆ ಇರುತ್ತದೆ.)
3. ಪ್ರಥಮ ಓವರ್ ಪವರ್ ಪ್ಲೇ ಆಗಿರುತ್ತದೆ. ಪವರ್ ಪ್ಲೇ ಸಂದರ್ಭದಲ್ಲಿ ಗರಿಷ್ಠ 2 ಆಟಗಾರರು ಮತ್ತು ಪವರ್ ಪ್ಲೇ ಮುಗಿದ ಬಳಿಕ ಮುಂದಿನ ಓವರ್ ಗಳಲ್ಲಿ ಗರಿಷ್ಠ 5 ಆಟಗಾರರಿಗೆ 30 ಗಜಗಳಿಗಿಂತ ಹೊರ ಭಾಗದಲ್ಲಿ ಕ್ಷೇತ್ರರಕ್ಷಣೆಯಲ್ಲಿ ತೊಡಗಲು ಅವಕಾಶವಿರುತ್ತದೆ.
4. ಗೂಟ ರಕ್ಷಕನನ್ನು (ವಿಕೆಟ್ ಕೀಪರ್) ಬದಲಾವಣೆ ಮಾಡುವ ಸಮಯದಲ್ಲಿ ಮತ್ತು ಬೌಲಿಂಗ್ ಮಾಡುವ ಮೊದಲು ಗಾರ್ಡ್ ಅನ್ನು ನಿರ್ಣಾಯಕರಿಗೆ ತಿಳಿಸತಕ್ಕದ್ದು, ಇಲ್ಲದಿದ್ದಲ್ಲಿ ಮುಂದಿನ ಎಸೆತವನ್ನು ನೋ ಬಾಲ್ ಘೋಷಿಸಲಾಗುವುದು.
5. ಪಂದ್ಯಾಟದಲ್ಲಿ ರನ್ನರ್ ಗೆ ಅವಕಾಶವಿರುವುದಿಲ್ಲ. 
6. ಪ್ರತಿ ತಂಡಗಳು ಪ್ರತಿ ತಂಡಗಳೊಡನೆ ತಲಾ ಒಂದು ಬಾರಿ ಆಡಬೇಕು. 
7. ಲೀಗ್ ಹಂತದ ಪ್ರತಿ ಪಂದ್ಯದಲ್ಲಿ ವಿಜೇತ ತಂಡಗಳಿಗೆ ಎರಡು ಅಂಕ ನೀಡಲಾಗುವುದು. ಪಂದ್ಯಗಳು ಸಮಬಲಗೊಂಡರೆ ಇತ್ತಂಡಗಳಿಗೂ ತಲಾ ಒಂದು ಅಂಕ ನೀಡಲಾಗುವುದು. 
8. ಲೀಗ್ ಹಂತ ಮುಗಿದಾಗ ಅಂಕ ಪಟ್ಟಿಯಲ್ಲಿ ಅಗ್ರ ಸ್ಥಾನಿಯಾದ ನಾಲ್ಕು ತಂಡಗಳು ಕ್ವಾಲಿಪೈಯರ್ ಹಂತಕ್ಕೆ ಪ್ರವೇಶಿಸಲಿವೆ. 
9. ಪಂದ್ಯಾಟದಲ್ಲಿ "cric heros app" ಮೂಲಕ ಸ್ಕೋರ್ ಹಾಕಲಾಗುವುದು. ಅಂಕ ಪಟ್ಟಿಯಲ್ಲಿ ಸಮಾನ ಅಂಕಗಳನ್ನು ಪಡೆದು ಮುಂದಿನ ಹಂತಕ್ಕೆ ತೇರ್ಗಡೆಯಾಗಲು ಪೈಪೋಟಿ ಏರ್ಪಟ್ಟರೆ ರನ್ ರೇಟ್ ಲೆಕ್ಕಚಾರ.  ಒಂದು ವೇಳೆ ನೆಟ್‌ವರ್ಕ್ ಸಮಸ್ಯೆಯಿಂದ "cric heros app" ಸರಿಯಾಗಿ ಕಾರ್ಯನಿರ್ವಹಿಸದೇ ಇದ್ದಲ್ಲಿ ಟೈ ಬ್ರೇಕರ್ ಪಂದ್ಯ ನಡೆಸಿ ವಿಜೇತರನ್ನು ಮುಂದಿನ ಹಂತಕ್ಕೆ ತೇರ್ಗಡೆಗೊಳಿಸಲಾಗುವುದು. 
10. ಕ್ವಾಲಿಪೈಯರ್ ಪಂದ್ಯಗಳು IPL ಮಾದರಿಯಲ್ಲೇ ನಡೆಯುತ್ತದೆ. 
11. ಕ್ವಾಲಿಪೈಯರ್ ಪಂದ್ಯಗಳಲ್ಲಿ ಗೆದ್ದು ಬಂದ ಎರಡು ತಂಡಗಳು ಫೈನಲ್ ನಲ್ಲಿ ಪ್ರಶಸ್ತಿಗಾಗಿ ಸೆಣಸಾಡುವುದು. 
12. ಕ್ವಾಲಿಪೈಯರ್, ಫೈನಲ್ ಪಂದ್ಯಗಳು ಟೈ ಆದಲ್ಲಿ ಸೂಪರ್ ಓವರ್ ಪಂದ್ಯಾಟ ನಡೆಸಲಾಗುವುದು. ಸೂಪರ್ ಓವರ್ನಲ್ಲೂ ಪಂದ್ಯ ಟೈ ಆದರೆ, ಸಮಯವಿದ್ದರೆ ಇನ್ನೊಂದು ಸೂಪರ್ ಓವರ್ ಇಲ್ಲದಿದ್ದಲ್ಲಿ ವಿಕೆಟ್ ಆಧಾರದ ಮೂಲಕ ವಿಜೇತರನ್ನು ಆಯ್ಕೆ ಮಾಡಲಾಗುವುದು.
13. ಪಂದ್ಯಾಕೂಟ ದಿನಾಂಕ 09/03/2025 ರಂದು ಸಮಯ ಸರಿಯಾಗಿ ಬೆಳಿಗ್ಗೆ 7.30ಕ್ಕೆ ಆರಂಭ, ಎಲ್ಲಾ ತಂಡಗಳು ಸರ್ವ ಸನ್ನದರಾಗಿ 15 ನಿಮಿಷಗಳು ಮುಂಚಿತವಾಗಿ ಮೈದಾನದಲ್ಲಿ ಹಾಜರಿರತಕ್ಕದ್ದು. 
15. ಸಂಘಟಕರ ಮತ್ತು ನಿರ್ಣಾಯಕರ ತೀರ್ಮಾನವೇ ಅಂತಿಮ. ಪ್ರತಿ ಆಟಗಾರರು ನಿರ್ಣಾಯಕರ ತೀರ್ಪಿಗೆ ಬದ್ದರಾಗಿ ಕ್ರೀಡಾ ಸ್ಪೂರ್ತಿ ಮೆರೆಯಬೇಕು.


 *ವಿಶೇಷ ಸೂಚನೆ:*
1. ಕ್ರಿಕೆಟ್ ಪಂದ್ಯಾಟದ ಉದ್ಘಾಟನೆ ಬೆಳಿಗ್ಗೆ 9 ಗಂಟೆಗೆ ನಡೆಯಲಿದೆ. ಈ ಸಮಯದಲ್ಲಿ ವೇದಿಕೆಯ ಮುಂಭಾಗದಲ್ಲಿ 5 ತಂಡದ ಆಟಗಾರರು ಸಾಲಾಗಿ ನಿಲ್ಲಬೇಕು. 
2. ಕ್ರಿಕೆಟ್ ಪಂದ್ಯಾಟದಲ್ಲಿ ಆಟಗಾರರು ಜೆರ್ಸಿ ಮತ್ತು ಟ್ರಾಕ್ ಪ್ಯಾಂಟ್ ಧರಿಸಬೇಕು. ಜೀನ್ಸ್ ಪ್ಯಾಂಟ್, ಶಾಟ್ಸ್ ಮತ್ತು ಚಪ್ಪಲಿ ಧರಿಸಿ ಆಡುವಂತಿಲ್ಲ. ಶೂ ಅಥವಾ ಬರಿಗಾಲಿನಲ್ಲಿ ಆಡಬೇಕು. 
3. ಮಧ್ಯಾಹ್ನ ಎಲ್ಲಾ ಆಟಗಾರರಿಗೆ, ತಂಡದ ಮಾಲೀಕರಿಗೆ ಮತ್ತು ಪ್ರೇಕ್ಷಕರಿಗೆ  ಊಟದ ವ್ಯವಸ್ಥೆ ಇರುತ್ತದೆ.
4. ಮೈದಾನದಲ್ಲಿ ಶುಚಿತ್ವವನ್ನು ಕಾಪಾಡಬೇಕಾಗಿ ವಿನಂತಿ.

-ಸಂಘಟಕರು ಕ್ಷತ್ರಿಯ ಪ್ರೀಮಿಯರ್ ಲೀಗ್
(ಮೇಲಿನ ಎಲ್ಲಾ ನಿಯಮಗಳನ್ನು ಬದಲಾಯಿಸುವ ಅಥವಾ ಬೇರೆ ನಿಯಮಗಳನ್ನು ಸೇರಿಸುವ ಹಕ್ಕು ಸಂಘಟಕರಿಗೆ ಇರುತ್ತದೆ)
Score all your matches for FREE!
© CricHeroes Pvt Ltd. All rights reserved. CIN U72901GJ2016PTC092938